ಶಿಳ್ಳಿ:
ನೀವ್ ಕಬೂಲ್ ಆಗ್ರಿ ಬಿಡ್ರಿ ನಾ ಬಿಡಾಂವ ಅಲ್ಲ. ಒಂದ ಸಿನಿಮಾನ, ನಾಟಕಾನ, ಹಾಡಾ, ನೃತ್ಯನಾ ಯಾವದಾ ಇರಲಿ ಅದರಾಗ ನವರಂಗ ತುಂಬೂದು ಪ್ರೇಕ್ಷಕರ ಹೃದಯಾಂತರಾಳದ ಪ್ರೋತ್ಸಾಹ ಹೊರಗ ಬರೂದ ಸೀಟಿ ಮೂಲಕ. ನೀವು ಅನೌನ್ಸ್ ಮಾಡಿ ಚಪ್ಪಾಳಿ ಗಿಟ್ಸಿಸ್ಕೋಬಹ್ದು,,,,ಆದರಾ ಸಿಳ್ಳಿನ ಖಂಡಿನ ಅಲ್ಲ. ನನಗ ಇಷ್ಟರಾಗ ೫೮ ತುಂಬ್ತಾವ. ಇಷ್ಟ ವಯಸ್ಸಾದ್ರು ಸೀಟಿ ಶಬ್ದದ ಉಂಟು ಮಾಡುವ ಕಂಪನದ ಆನಂದ ಅನುಭವಿಸ್ಲಿಕ್ಕೇನೆ ಸಿನಿಮಾಕ್ಕ, ನಾಟಕಕ್ಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕ ಹೋಗ್ತಿರ್ತೀನಿ.ನನಗ ಸೀಟಿ ಹೋಡಿಯೋದಕ್ಕ ಬರಾಣಿಲ್ಲ. ಆ ಒಂದ ಸೀಟಿ ಸಲುವಾಗಿ ಚಡಪಡಸ್ತೀನಿ. ಒಂದು, ಅದರ ಹಿಂದ ಇನ್ನೊಂದು, ಮಗದೊಂದು ಸೀಟಿಗಳು ಬಂದು ಜೊತಿಗಿ ಚಪ್ಪಾಳಿ ಬಿದ್ರನಾ ಮೈ ನವಿರೇಳ್ತದ. ನಮ್ಮ ವಯಸ್ಸನ ಕಡಿಮೆ ಮಾಡೂ ಶಕ್ತಿ ಈ ಸೀಟಿಗಿ ಅದಾ. ಸಣ್ಣಾಂವ ಇದ್ದಾಗ, ರಾಜ್ಕುಮಾರ್ ಸಿನಿಮಾಕ್ಕ ಅದು ಹ್ಯಂಗೋ ರೊಕ್ಕ ಹೊಂದ್ಸಿಗೊಂಡು first day first showಕ್ಕನಾ ಹಾಜರ. ಅಣ್ಣಾವ್ರು ಆ ಸಿನಿಮಾದಲ್ಲಿ ಮೊದ್ಲನೆ ಸರ್ತಿ ತೆರೆ ಮ್ಯಾಲ ಬರುವಾಗ ಸೀಟಿ ಸಂಭ್ರಮ ತಾರಕದಲ್ಲಿರುತಿತ್ತು. ನಾ ಸೀಟಿ ಹೊಡೆಂವ ಅಲ್ಲದ ಕಾರಣ, ಒಂದು ಪುಗ್ಗಾ ಕ(Balloon)ಗಾಳಿ ಊದಿ ಫಟ್ ಅಂತ ಒಡಿತಿದ್ದೆ. ನನ್ತರ, ಪುಗ್ಗಾ ವೀರರು ಭಾಳ ಇರ್ತಿದ್ರು. ಈ ಬಲೂನ ಒಡೆಯುವಾಗಿನ ಶಬ್ದ ಜೊತಿಗಿ ಸೀಟಿಗಳು ತರೋ ಆನಂದ ಈಗ ಎಷ್ಟ ರೊಕ್ಕ ಕೊಟ್ರು ಸಿಗೂದಿಲ್ಲ ಬಿಡ್ರಿ.
No comments:
Post a Comment