ಮುದ್ದಿ ಪಲ್ಯ
ಮುದ್ದಿಪಲ್ಯ ಹೆಸರು ಕೇಳಿದರ ನನ ಬಾಯಾಗ ನೀರ ಒಸರತಾವ. ನನ್ನ ಹಾಂಗ ಮುದ್ದಿಪಲ್ಯ ಅಭಿಮಾನಿಗಳು ಭಾಳ ಮಂದಿ ಅದರಾ ಅಂತ ನನಗನ್ಸ್ಯಾದ. ಏನಿದು ಅಂತಾ ನಿಮ್ ತಲ್ಯಾಗ ಹುಳಾ ಕೊರಿಲಕ್ಹತ್ತಿರ್ಬಹ್ದು. ಮುದ್ದಿಪಲ್ಯ ಅಂದರ,,,,,ಈ ಭಾಗದ ಅತ್ಯಂತ ಜನಪ್ರಿಯ ವ್ಯಂಜನ ಅದು. ಅದರಲ್ಲೂ ಬ್ರಾಹ್ಮಣರಲ್ಲಿ ಸ್ವಲ್ಪ ಜಾಸ್ತಿ. ತೊಗರಿ ಬ್ಯಾಳಿನ ಘಟ್ಟಿ ಹದಕ್ಕ ಬೇಯ್ಸಿ, ಅದರಾಗ ಮೆಂತಿ, ಹುಣಸಿಕ್, ಪಾಲಕ, ಗೋಳಿ ಹಿಂಗ ಯಾವ್ದರ ಒಂದ ತಪ್ಪಲ ಪಲ್ಯನಾ ತಾಳ್ಸಿ,,,,ಬ್ಯಾಳಾಗ ಕಲೆಸಿ,ಒಂದ್ಕಾಲ್ಕ್ ಬ್ಯಾಡ್ಗಿ ಮೆಣ್ಸಿನ್ಕಾಯಿ ಹಾಕಿ ಒಗ್ಗರಣಿ ಕೊಟ್ರ ಏನ ಹೆಳ್ಳರ್ರಿ ಅದರ ಕಥಿ. ನಮ್ಕಡಿ,,ವಿಶೇಷ ಅಂದರ,,,ಪುಂಡಿ ಪಲ್ಯ ಸೇರ್ಸಿ ಮಾಡೋ ಮುದ್ದಿಪಲ್ಲ ಅಂದ್ರ ಅದಕ್ಕ ಸೆಲೆಬ್ರಿಟಿ ಸ್ಥಾನ ಬಂದ್ಹಾಂಗ ತಿಳ್ಕೋರಿ. ಈ ಮುದ್ದಿಪಲ್ಯ ಸಲುವಾಗಿನ ಕೆಲ ಸಲ ಮದುವಿ ಮನ್ಯಾಗ ಜಗಳ ಆಗ್ತಾವ. 'ಹಣಿಬಾರ್ದಾಗ ಮುದ್ದಿಪಲ್ಯ ಮಾಡ್ಸೂದು ಆಗಿಲ್ಲ' ಎಂಬ ಮೂದಲಿಕೆಯ ವಾಗ್ಬಾಣ ಸಹಜ. ನನ್ಗಂತೂ, ಹುಳಿ ಮಾಡಿದ ದಿನ, ನಮ್ಮಮ್ಮ ನನ್ಸಲುವಾಗಿಯೇ ಬ್ಯಾಳಿ ಬ್ಯಾರೆನ ತಗ್ದಿಟ್ಟು ಮುದ್ದಿಪಲ್ಯ ಮಾಡಿ ಬಡಸ್ತಿದ್ಳು, ಅಷ್ಟು ಕಕ್ಕುಲಾತಿ ನನ ಮ್ಯಾಲೆ. ನನ್ಕಹಿಡಿದಾಕೆಯೂ ಮುದ್ದಿಪಲ್ಯದ Authority ಆಗ್ಯಾಳ. ಈಗಿನ ಕಾಲ್ದಾಗ ಏನೆಲ್ಲಾ ನವ ನವೀನ ಖಾದ್ಯಗಳು ಬಂದ್ರೂ,,,ಅವ್ಯಾವು ಮುದ್ದಿಪಲ್ಯದ ಅಗ್ರಸ್ಥಾನ ಪಲ್ಲಟ ಮಾಡ್ಲಿಕ್ಕೆ ಆಗಿಲ್ಲ. ಅಂಥಾ, ಖದರ್ರು ಈ ಮುದ್ದಿಪಲ್ಯದ್ದು,,,,,ನಿವೇನಂತಿರಿ,,,,
No comments:
Post a Comment