ಆರತಿ ಮಾಡುವೆ:-
ಆರತೀ ಮಾಡುವೆ,,,,,ನಾಗಿರಿಧರಗೆ,,,,ಶ್ರೀನರಹರಿಗೆ,,,,,,,ಶರಣಾಗತ ಪರಿಪಾಲನಿಗೆ ಆರತಿ ಮಾಡುವೆ' ಈ ಆರತಿಯ ಹಾಡನ್ನು ಅಭಿಲಾಷೆಯ ಮೇರೆಗೆ ಸುಶ್ರಾವ್ಯ ಶಾರಿರದಲ್ಲಿ ಹಾಡಿದವರೆ
ಈಕೆ ಸುಧಕ್ಕ,,,,,ವರಸೆಯಲ್ಲಿ ನನಗೆ ಅಕ್ಕ ಅದರಲ್ಲಿ ಎರಡು ಮಾತಿಲ್ಲ. ನಮ್ಮಕ್ಕನ ಜನನಿ ಬೇರೆ(ನನ್ನ ತಾಯಿಯ ಅಕ್ಕ ದೊಡ್ಡಮ್ಮನ ಮಗಳು)ಎಂಬ ಸತ್ಯದ ಅರಿವು ನನಗಾಗಿದ್ದುದು ನನಗೆ 'ಏನು, ಯಾಕೇ, ಎತ್ತ' ಎಂಬ ಪ್ರಶ್ನೆಗಳನ್ನು ಹಾಕುವ ಪ್ರಜ್ಞೆ ಮೂಡಿದಾಗ. ಅದನ್ನ ಬಿಟ್ರೆ,,,,,ಒಡ ಹುಟ್ಟಿದ ಅಕ್ಕ ಅಲ್ಲ ಎಂಬ ಭಾವನೆಯನ್ನು ನನಗೆ ಮೂಡದ ಹಾಗೆ ಬಾಳಿ ಬದುಕಿ ೨೦೧೪ರ ಅಗಸ್ಟ ತಿಂಗಳಲ್ಲಿ ಶ್ರೀಹರಿಯ ಪಾದ ಸೇರಿದ ಜೀವ ಈ ನನ್ನಕ್ಕ. ನಮ್ಮ ತಾಯಿಯ ತಂದೆ ಭೀಮ ಭಟ್ಟರನ್ನು ನೋಡಿಕೊಳ್ಳಲು ಮುದಗಲ್ ನಲ್ಲಿ ವಾಸವಿದ್ದ ಸುಧಕ್ಕ ನನಗೆ ಆಪ್ತ ಸಖಿಗಿಂತಲೂ ಹೆಚ್ಚು. ಅನಿವಾರ್ಯ ಕಾರಣಗಳಿಂದ ಮುದಗಲ್ ನಲ್ಲಿ ವಾಸಿಸುವ ದಿನಗಳಲ್ಲಿ ನನ್ನನ್ನು ಅಂಗೈನಲ್ಲಿ ಹಿಡಿದುಕೊಂಡು ಜೋಪಾನ ಮಾಡಿದ ಜೀವ ನನ್ನಕ್ಕ. ಈಕೆಯದದ್ದು ಭರಪೂರ ಪ್ರೀತಿ. ಸುಧಕ್ಕನ ಪ್ರಭಾವಳಿ ನನ್ನ ಮೇಲೆ ಢಾಳಾಗಿದೆ. ಈಕೆಗೆ ನಾನು ಅಚ್ಚಿಯ(ಅಬೂಚಿ)ಮಗ ತಮ್ಮನಾದರೂ, ರಕ್ತ ಹಂಚಿಕೊಂಡು ಹುಟ್ಟಿದ ತಮ್ಮನಿಗಿಂತ ಒಂದ ಗುಲಗಂಜಿ ತೂಕ ಹೆಚ್ಚಿಗೆ ಕೊಟ್ಟಾಕೆ. ಬಹಳ ಅಃತಕರಣದ ಜೀವ. ಸದಾ ಕಣ್ಣಿರು ಧುಮ್ಮಿಕ್ಕಲು ಸಿದ್ಧವಾಗಿರುವ ಬಟ್ಟಲುಗಣ್ಣುಗಳು. ಹಣೆಗೆ ಢಾಳಾದ ಕುಂಕುಮ. ಸದಾ ತುಂಟ ನಗೆ ಸೂಸುವ ಮುಖಾರವಿಂದ and what not. ಸೋದರ ಮಾವನನ್ನೇ ವರಿಸಿ ಹೈದ್ರಾಬಾದ್ ಸೇರಿಕೊಂಡಿದ್ದ ಸುಧಕ್ಕನೊಂದಿಗೆ ನನ್ನ ಸಂಪರ್ಕ ನಿರಂತರ. ಒಂದ್ವೇಳೆ, ಯಾವುದೋ ಕಾರಣಕ್ಕೆ ಫೋನಾಯಿಸಲು ಆಗದ ಸಂಧರ್ಭದಲ್ಲಿ ಸುಧಕ್ಕನ ಫೋನ್ ಬಂದೆ ಬರುತ್ತಿತ್ತು. 'ಕೆಲ್ಸ ಬಾಳದೇನು ಯಂಕಪ್ಪ ಅದಕಾ ಫೋನ್ ಮಾಡಲು ಮರ್ತಿದಿ' ಎನ್ನುತ್ತಲೆ ಗಂಟೆಗಟ್ಟಲೆ ಹರಟುತಿದ್ದ ನಮ್ಮಕ್ಕ ಈಗ ನೆನಪು ಮಾತ್ರ. ಅಚ್ಚಿ(ನಮ್ತಾಯಿ ಸೀತಾಬಾಯಿ)ಯ ಮಕ್ಕಳು ನೀವೆಲ್ಲಾ ಭಾಳಾ ಶ್ಯಾಣ್ಯಾರು ಎನ್ನುತ್ತ ನಮ್ಮ ,I.Q,ನ್ನು ಮುಕ್ತ ಕಂಠದಿಂದ ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಿದ್ದ ಪರಿ ಅನನ್ಯ. ನಮ್ಮ ಮನೆಯ ಎಲ್ಲ ಕಾರ್ಯಕ್ರಮದಲ್ಲಿ ಸುಧಕ್ಕನ ಓಡಾಟ ಒಂಥರಾ rule of the day. ಆ ದೇವರು ಅಃತಕರಣದ ಜೀವಗಳನ್ನು ಬೇಗನೆ ತನ್ನ ಬಳಿಗೆ ಕರೆಸಿಕೊಳ್ತಾನೆ ಎಂಬ ಮಾತನ್ನು ದಿಟವಾಗಿಸಿದ ಸುಧಕ್ಕ ಮಾರಣಾಂತಿಕ ಕ್ಯಾನ್ಸರ್ ಗೆ ಬಲಿಯಾಗೀಯೆ ನೆನಪಾಗಿ ಉಳಿದಳು. ಆಕೆ, ತನ್ನ ಅಂತಿಮ ದಿನಗಳಲ್ಲಿ ನನ್ನನ್ನು ಭಾಳಾ ನೆನೆಸುತಿದ್ದ ಕಾರಣ ನಮ್ಮ ಮಾವಾ ಅವರ ಅಣತಿಯಂತೆ ಮೇಲಿಂದ ಮೇಲೆ ಹೈದರಾಬಾದ್ ಗೆ ಹೋಗಿ ಬರುತಿದ್ದೆ. ಕೊನೆಗೂ, ಜವರಾಯ ತನ್ನ ಪಾಶ ಬೀಸಿ ನನ್ನಕ್ಕನ್ನು ಕರೆದೊಯ್ದೆ ಬಿಟ್ಟ. ಮೂವರು ಮಕ್ಕಳಲ್ಲಿ ಇಬ್ಬರ ಲಗ್ನವನ್ನು ಮಾತ್ರ ಆಕೆ ಕಂಡಳು. ಕೊನೆಯ ಮಗನ ಮದುವೆ ಆಮೇಲಾಯಿತು. ನಂಮಾಂವ,ಹನುಮಂತರಾವ್ ಕುಲಕರ್ಣಿ ನಾನು ಹೈದರಾಬಾದ್ ಗೆ ಭೇಟಿ ಕೊಟ್ಟಾಗೆಲ್ಲಾ ಕಣ್ಣಿರಾಗುತ್ತಾರೆ. ಅದ್ಯಾಕೋ, ಈ ಕ್ಯಾನ್ಸರ್ ರೋಗ ಲಿಂಗ್ಸೂರಿನ ನಮ್ಮ ತಾಯಿ ತವರು ಮನೆಯ ಹಲವಾರು ಜೀವಗಳನ್ನು ಕಸಿದುಕೊಂಡಿದೆ. ಇಂದಿಗೂ, ಕನಸಿನಲ್ಲಿ ಬಂದು ನನ್ನನ್ನು ಮಾತಿಗೆಳೆಯುವ ಸುಧಕ್ಕನ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. I miss you ಅಕ್ಕ,,,,,,
No comments:
Post a Comment